ವಾಲ್ಟರ್ ರೂಡೋಲ್ಫ್ ಹೆಸ್ (1881-1973) ಸ್ವಿಟ್ಸರ್ಲೆಂಡಿನ ಒಬ್ಬ ದೇಹವಿಜ್ಞಾನಿ ಮತ್ತು 1949 ರ ನೊಬೆಲ್ ಪ್ರಶಸ್ತಿ ಪುರಸ್ಕೃತ. == ಜನನ, ವಿದ್ಯಾಭ್ಯಾಸ == ಫ್ರಾನ್‌ಫೆಲ್ಡ್‌ನಲ್ಲಿ ಜನನ. ಲ್ವಾಸೇನ್, ಬರ್ನ್, ಝೂರಿಚ್, ಬರ್ಲಿನ್ ಮತ್ತು ಕೀಲ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಪದವೀಧರನಾದ (1906). == ವೃತ್ತಿಜೀವನ, ಸಾಧನೆಗಳು == ಝೂರಿಚ್ ವಿಶ್ವವಿದ್ಯಾಲಯದಲ್ಲಿ ದೇಹವಿಜ್ಞಾನ ಪ್ರಾಧ್ಯಾಪಕನೂ ಫಿಸಿಯಾಲಜಿ ಇನ್‌ಸ್ಟಿಟ್ಯೂಟಿನ ನಿರ್ದೇಶಕನೂ (1917-51) ಆಗಿ ಸಂಶೋಧನೆ ಮಾಡಿದ. ರಕ್ತದೊತ್ತಡದ ಕ್ರಮನಿಯಂತ್ರಣ ಹಾಗೂ ಗುಂಡಿಗೆ ಮಿಡಿತದರ ಮತ್ತು ಉಸಿರಾಟದೊಂದಿಗೆ ಇವುಗಳ ಸಂಬಂಧ-ಇವನ್ನು ಅಧ್ಯಯನಗೈದ. ಮಿದುಳು ತಳದಲ್ಲಿಯ ರಚನೆಗಳ ಕ್ರಿಯಾತಂತ್ರದ ಬಗ್ಗೆ 1925ರಿಂದ ಮುಂದಕ್ಕೆ ಸಂಶೋಧನೆ ಎಸಗಿದ. ಮಿದುಳಿನ ವಿಶಿಷ್ಟ ಪ್ರದೇಶಗಳನ್ನು ಅತಿಸೂಕ್ಷ್ಮ ಸೂಜಿ ಎಲೆಕ್ಟ್ರೋಡುಗಳನ್ನು ನವುರಾಗಿ ಕುತ್ತಿ ಉದ್ದೀಪನಗೊಳಿಸುವ ತಂತ್ರಗಳನ್ನು ಅಭಿವೃದ್ಧಿಪಡಿಸಿದ. ಈ ತಂತ್ರಗಳಿಂದಾಗಿ ಮಿದುಳವ್ಯಾಪಾರ ಅರಿಯುವಲ್ಲಿ ಗಮನಾರ್ಹ ಪ್ರಗತಿ ಸಾಧಿಸುವುದು ಕೈಗೂಡಿತು. ಹೈಪೊತೆಲಮಸ್‌ನ ವಿವಿಧ ಭಾಗಗಳನ್ನು ಉದ್ದೀಪನಗೊಳಿಸಿ ದೇಹೋಷ್ಣತೆ, ರಕ್ತದೊತ್ತಡ, ಉಸಿರಾಟಗಳಲ್ಲಿಯೂ ಜೊತೆಗೆ ಕೋಪ, ಲೈಂಗಿಕಾಸಕ್ತಿ, ನಿದ್ರೆಗಳಲ್ಲಿಯೂ ವ್ಯತ್ಯಯಗಳನ್ನು ತರಬಹುದೆಂದು ಹೆಸ್ ತೋರಿಸಿದ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ವಾಲ್ಟರ್ ರೂಡೋಲ್ಫ್ ಹೆಸ್ . , 12 1949 . . . ".. 2008, . 4" (). . ; . ; . (2011). " – ". . 86 (10): E49. :10.4065/.2011.0560. 3184029. 22069789.